Tuesday, December 30, 2008

ಸ್ಟಿರತೆಯ ಸೂಚನೆಯೇ

ಸ್ನೇಹಿತರೇ.. ಉಪ ಚುನಾವಣೆಯ ಫಲಿತಾಂಶವನ್ನ ಭಿನ್ನ ರೀತಿಯಲ್ಲಿ ಬಣ್ಣಿಸಲಾಗ್ತಿದೆ. ಸ್ತಿರ ಸರ್ಕಾರಕ್ಕೆ ಜನತೆ ಕೊಟ್ಟ ತೀರ್ಪು ಅನ್ನೋದು ಮುಖ್ಯಮಂತ್ರಿಯ ನುಡಿ. ಅದೇನೇ ಇದ್ರು ಮತದಾರ ಮಾತ್ರ ಸರ್ಕಾರಕ್ಕೆ ಸ್ಪಶ್ಟ ಎಚ್ಚರಿಕೆ ಸಂದೇಶ ನೀಡಿದ್ದಾನೆ. ನೀವೇನು ಮಾದರಿ ಆಡಳಿತ ನಡೆಸ್ತಿದೀರೀ ಅನ್ನೋ ಸರ್ಟಿಫಿಕೇಟ್ ಅಂತೂ ಇದಲ್ಲ. ಹಾಗಾಗಿ ಬಿಜೆಪಿ ಫಲಿತಾಂಶದಿಂದ ಉಬ್ಬುಬೇಕಿಲ್ಲ.ಬದಲಾಗಿ ವಸೂಲಿ ರಾಜಕಾರಣಕ್ಕೆ ತಿಲಾಂಜಲಿ ಇಟ್ಟೂ ಮುಂದುವರಿಯುವದು ಒಳಿತು.
ಜೊತೆಗೆ ಈವತ್ತಿನ ಫಲಿತಾಂಶದಿಂದ ಕಾಂಗ್ರೆಸ್ ದೊಡ್ಡ ಪಾಟ ಕಲೀಬೇಕಿದೆ. ಜನ ಮಣ್ಣಿನ ಮಕ್ಕಳನ್ನ ಮರೆತಿಲ್ಲ ಅನ್ನೋದನ್ನೂ ತೋರ್ಸಿದಾರೆ. ಹಾಗಾಗಿ
ರಾಜ್ಯದ ಅಭಿವ್ರದ್ದಿ ಮಂತ್ರ ಪ್ರಮುಖವಾಗಲಿ. ಪಕ್ಸಾತೀತವಾಗಿ ಜನಪರ ಚಿಂತನೆಗಳು ನಡೆಯಲಿ.

Thursday, December 25, 2008

ಮತ್ತೊಂದು ಸುತ್ತು ಉರುಳಿತು ಕಾಲಚಕ್ರ

ಗೆಳೆಯರೇ.. ನಿನ್ನೆ ಮೊನ್ನೆ ೨೦೦೮ ಬಂದಂಗಿತ್ತು. ಈವಾಗಾಗ್ಲೆ ವರ್ಶ ಮುಗಿದೇಬಿಡ್ತು. ಈಗ ೨೦೦೯ರ ಸರದಿ..ಈ ೩೬೫ ದಿನಗಳಲ್ಲಿ ನಾವೇನು ಸಾದಿಸಿದ್ದೇವೆ ಅಂದ್ರೆ ಹೇಳೋದು ಸ್ವಲ್ಪ ಕಸ್ಟಕರ. ಕಾಲಚಕ್ರ ಉರುಳುತಿರುತ್ತೆ..ಒಂದು ರೀತೀಲಿ ೨೦೦೮ ನೆನಪಿಸಿಕೊಳ್ಳುವಂತದ್ದೆ. ಕನ್ನಡಕ್ಕೆ ಶಾಸ್ತೀಯ ಸ್ಟಾನ ಸಿಕ್ತು ಅನ್ನೋದು ಸಮಾದಾನ ತರೋವಂತದ್ದು. ಯಡಿಯೂರಪ್ಪಗೆ ಡಾಕ್ಟರೇಟ್ ಸಿಕ್ತು ಅನ್ನೋದು ಖುಶಿ ಪಡೋವಂತದ್ದೇನು ಅಲ್ಲ. ಮುಂಬಯಿ ಮೇಲೆ ನಡೆದ ಉಗ್ರರ ದಾಳಿ ಬೆಚ್ಚಿಬೀಳಿಸುವಂತದ್ದು. ಸೇನೆಯ ಪ್ರತಿ ಕಾರ್ಯಾಚರಣೆ ಶ್ಲಾಘಿಸುವಂತದ್ದು. ದೇಶದಲ್ಲಿ ಯುದ್ದದ ಸನ್ನಿವೇಶ ನಿರ್ಮಾಣವಾಗಿರೋದು ಆತಂಕದ ವಿಶಯ.
೨೦೦೯ರಲ್ಲಿ ಯಶಸ್ಸು ನಮ್ಮದಾಗಲಿ.....

Monday, December 22, 2008

ಅವನನ್ನೂ ಬಿಟ್ಟಿರಲಿಲ್ಲ

ಆಭಿವ್ರದ್ದಿ ಕಾರ್ಯಗಳಿಗೆ ಅಡ್ದಿ ಪಡಿಸೋದು ಅಡ್ದಗಾಲು ಹಾಕೋದು ಹೊಸದಲ್ಲ. ಇದೀಗ ಬೆಂಗಳೂರಿಗೆ ಅಗತ್ಯವಾಗಿದ್ದ ರಸ್ತೆಯ ಬಳಕೆಯೂ ವಿವಾದಕ್ಕೆ ಕಾರಣವಾಗಿರೋದು ಮಾತ್ರ ಒಳ್ಳೆ ಬೆಳವಣಿಗೆ ಅಲ್ಲ. ಅಂದು ಸಾಲುಮರ ನೆಡುವಾಗ್ಲೂ ಸಾಮ್ರಾಟ್ ಅಶೋಕನನ್ನೂ ಬಿಡಲಿಲ್ಲ ಈ ರೀತಿಯ ಶಕುನಿಗಳು. ಅದ್ರಲ್ಲೂ ಈಗ ಬಿಟ್ಟಾರೆಯೇ? ಹಾಗಾಗಿಯೇ ಅಶೋಕ್ ಖೇಣಿ ಇದೀಗ ದೊಡ್ದವರ ಆಹಾರವಾಗಿದ್ದಾರೆ. ವಯಕ್ತಿಕ ಪ್ರತಿಶ್ಟೆ ಏನೇ ಇರ್ಲಿ..ಸಾವಿರಾರು ಮಂದಿಗೆ ಅನುಕೂಲವಾಗುವ ಇಂಥ ಯೋಜನೆಯ ಅಗತ್ಯ ಮಾತ್ರ ಬೆಂಗಳೂರಿಗಿದೆ. ಈ ರಾಜ್ಯಕ್ಕಿದೆ. ಇದನ್ನ ಆಳೋಮಂದಿ ಹಾಗೂ ಅಭಿವ್ರದ್ದಿ ಮಂತ್ರ ಜಪಿಸೋರು ಮತ್ತು ಮಣ್ಣಿನ ಮಕ್ಕಳು ಅನ್ನಿಸ್ಕೊಂಡೋರು ಅರ್ತ ಮಾಡ್ಕೋಬೇಕಿದೆ..

Tuesday, December 16, 2008

gunathmaka chinthane yirali....

ನಾಡಗೀತೆಯನ್ನು ಸಂಕ್ಸಿಪ್ತಗೊಳಿಸಬೇಕು..ತುಂಬಾ ಉದ್ದವಾಯಿತು..ಆಲಾಪನೆ ಬೇಡ...ಟೂರಿಸ್ಟ್ ಸಂಗೀತ ಮಾಡ್ಬೇಡಿ...ಈ ರೀತಿ ಅಣಿಮುತ್ತು ಉದುರಿಸಿರೋರು ಬೇರಾರೂ ಅಲ್ಲ. ನಮ್ಮ ಮಹಾನ್ ಸಾಹಿತಿ ಡಾ.ಅನಂತಮೂರ್ತಿ. ಒಂದು ರೀತೀಲಿ ವಿವಾದ ಹುಟ್ಟುಹಾಕೋದು ಅದ್ರಿಂದ ಏನೋ ಸಾದಿಸಿದ ತ್ರಪ್ತಿ ಅನುಭವಿಸೋದು ಯಾಕೋ ಸರಿ ಕಾಣಲ್ಲ. ಈಗಾಗ್ಲೆ ಸಾಕಶ್ಟು ಮಂದಿ ಈ ಬಗ್ಗೆ ಮಾತ್ನಾಡಿ ಉಗಿಸಿಕೊಂಡಿದ್ದು ಆಗಿದೆ. ನಾಡಗೀತೆನಾ ಚಿಕ್ಕದು ಮಾಡ್ಬೇಕು ಅನ್ನೋ ಉಚಿತ್ ಸಲಹೆ ಕೊಡೋ ನಮ್ಮ ಸಾಹಿತಿಗಳು ಕನ್ನಡಕ್ಕೆ ಶಾಸ್ತ್ರೀಯ ಭಾಶೆಯ ಸ್ಟಾನ ಸಿಕ್ಕಿದ ನಂತರ ಏನ್ಮಾಡ್ಬೇಕು ಅಂತ ಗುಣಾತ್ಮಕ ಸಲಹೆ ಕೊಡ್ಲಿ..
ಸ್ವಲ್ಪ ಸಹಾಯ ಆಗ್ಬಹುದು ಅಲ್ವಾ..ಸ್ನೇಹಿತ್ರೆ..