Monday, January 12, 2009

ಇದಾದರೂ ಸಾರ್ತಕವಾಗಲಿ....

ರಾಜದಾನಿ ಬೆಂಗಳೂರನ್ನು ಹೊರತು ಪಡಿಸಿ ಬೇರೆಡೆ ಅದಿವೇಶನ ನಡೆಸಿದ ಕೀರ್ತಿ ಮಾತ್ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಲ್ಲಬೇಕು. ಆದ್ರೆ ೨೦೦೭ ರಲ್ಲಿ ಬೆಳಗಾವಿಯಲ್ಲಿ ನಡೆದ ಜಂಟಿ ಅದಿವೇಶನ್ ಕೇವಲ ಅಬ್ಬರಕ್ಕಶ್ಟೇ ಸೀಮಿತವಾಗಿತ್ತು. ಈ ವರುಶವೂ ೧೦ ದಿನಗಳ ಕಾಲ ಅದಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವದು ಘೋಶಣೆಯಾಗಿಯೇ ಉಳಿದಿದೆ. ಗಡಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಹ್ಯೆದ್ರಾಬಾದ ಕರ್ನಾಟಕ ಪ್ರತ್ಯೇಕ ದ್ವಜಾರೋಹಣ ನಡೆದೇಯಿದೆ. ಈ ಜನವರಿ ೨೬ಕ್ಕೂ ಮತ್ತೆ ಹಾರುತ್ತೆ. ಒಂದೆಡೆ ಕಾಸರಗೋಡು ಮತ್ತೊಂದೆಡೆ ಬೆಳಗಾವಿ. ಇನ್ನೊಂದೆಡೆ ಹೊಗೇನಕಲ್ ...ಹೀಗೆ ಕಿತ್ತು ತಿನ್ನುವವರ ಸಂಖ್ಯೆಯೇ ದೊಡ್ಡದಿದೆ. ಪಕ್ಸದ ಪ್ರಣಾಳಿಕೆಯಲ್ಲಿ ಅಬ್ಬರಿಸಿದ್ದ ಬಿಜೆಪಿ ಆಡಳಿತದಲ್ಲಿ ಅದನ್ನ ಜಾರಿಗೊಳಿಸಿದಲ್ಲಿ ಬೆಳಗಾವಿಯಲ್ಲಿ ಅದಿವೇಶನ ನಡೆಸಿದ್ದಕ್ಕೂ ಒಂದು ಅರ್ತ ಬಂದೀತು..ಇತ್ತ ಡಾ. ಬಿ.ಎಸ್.ಯಡಿಯೂರಪ್ಪ ಚಿಂತಿಸಿದರೆ
ಅಲ್ಪವಾದರೂ ಅನುಕೂಲವಾದೀತು.
ಇದಕ್ಕೆ ಹೊರತಾಗಿ ಮತ್ತೊಂದು ಸಂಗತಿ ಪ್ರಸ್ತಾಪಿಸ್ತಿದೇನೆ. ನಾನು ಕಳೆದ ವಾರ ಎಂ.ಎಂ.ಹಿಲ್ಸ್ ನತ್ತ ಕಾರ್ಯನಿಮಿತ್ತ ಹೋಗಿದ್ದೆ. ಹಾಗೇ ನರಹಂತಕ ವೀರಪ್ಪನ್ ಹುಟ್ಟೂರು ಗೋಪಿನಾತಂಗೂ ವಿಸಿಟ್ ಕೊಟ್ಟಿದ್ದೆ. ಆತನ ತಲೆ ಉರುಳಿ ನಾಲ್ಕು ವರುಶ ಕಳೆದಿದ್ದರೂ ಅಲ್ಲಿನ ಜನರಲ್ಲಿ ಆತನ ನೆನಪು ಇನ್ನೂ ಮಾಸಿಲ್ಲ. ಅವರಿನ್ನೂ ಭೀತಿಯಿಂದ ಹೊರ ಬಂದಿಲ್ಲ. ಆತನ ಸಮಾದಿ ನೋಡೋ ಕುತೂಹಲದಿಂದ ನಾವು ಹೋಗಿದ್ದು ತಮಿಳುನಾಡಿನ ಮೂಲಕ್ಕಾಡಿಗೆ. ಸ್ಮಶಾನದ ಒಂದು ಮೂಲೆಯಲ್ಲಿ ಕಂಡ ಮಣ್ಣಿನ ರಾಶಿ ವೀರಪ್ಪನ್ ಸಮಾದಿ ಎಂದು ತಿಳಿದಾಗ ಅನಿಸಿದ್ದು ಅಂದ್ರೆ ಮಾನವ ಮೂಳೆ ಮಾಂಸದ ತಡಿಕೆ.... ಈ ವಾಸ್ತವ ತಿಳಿಯೋ ಹೊತ್ತಿಗೆ ಆತ ಬಹುದೂರ ಸಾಗಿರ್ತಾನೆ...ತಪ್ಪು..ಸರಿಗಳ...ಮಾರ್ಗ ಅರಿಯುವ ಮುನ್ನ ...ಬದುಕಿಗೆ ಅಂತ್ಯದ ಸಮಯ ಸಮೀಪಿಸಿರುತ್ತೆ....