Sunday, February 15, 2009

ಸರ್ಕಾರಕ್ಕೆ ಒಂದು ಎಚ್ಚರಿಕೆ...

ಪ್ರತಿ ವಾರಾಂತ್ಯದಲ್ಲಿ ಒಂದು ಸ್ಪೆಶಲ್ ರಿಪೋರ್ಟ ಕೊಡೋ ಹೊಣೆಗಾರಿಕೆ ನಂದು. ಪ್ರತಿ ವಾರ ಏನಾದ್ರು ಬೇಟೆ ಆಡ್ಲೇಬೇಕು. ಹಾಗಂದುಕೊಂಡೇ ಈ ವಾರ ನಾನು ಹೊರಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ..ಸರ್ಕಾರ ೫ ಸಾವಿರ ಕೋಟಿ ವೆಚ್ಚದಲ್ಲಿ ಭದ್ರಾ ನದಿ ನೀರನ್ನ ಪಕ್ಕದ ತುಮಕೂರು-ಚಿತ್ರದುರ್ಗ-ಕೋಲಾರ ಜಿಲ್ಲೆಗಳಿಗೆ ತರ್ತಿದೆ. ತರ್ಲಿ ಬಿಡಿ..ಆದ್ರೆ ಆ ಭಾಗದ ಜನರನ್ನ ಹಾಳುಮಾಡಿ ಮತ್ತೊಬ್ಬರ ಉದ್ದಾರಕ್ಕೆ ಮುಂದಾಗ್ತಿರೋದು ಯಾಕೆ ಅಂತಾ ಗೊತ್ತಾಗ್ತಿಲ್ಲ. ಈ ಭಾಗದಲ್ಲಿ ೬ ಕಿಮೀಯಶ್ಟು ಸುರಂಗ ತೋಡಿ ನೀರನ್ನ ತರ್ಲಾಗ್ತಿದೆ. ಈ ಸುರಂಗಕ್ಕೆ ನಾಗರಿಕರ ವಿರೋದ ಯಾಕಪ್ಪಾ ಅಂದ್ರೆ ಈಗಾಗ್ಲೆ ಹಾಸನದ ಬಾಗೂರು-ನವಿಲೆ ದುರಂತ ಯೋಜನೆ ಕಣ್ಮುಂದಿನ ನಿದರ್ಶನ. ಹೀಗಿದ್ದೂ ಸರ್ಕಾರ ಜರ್ಮನಿ ಟೆಕ್ನಾಲಜಿ ಮಾಡ್ತೀವಿ ಅಂತಿದೆ. ಅದೇನೇ ಮಾಡಿದ್ರು ಭೂಮಿ ಒಳಗೇ ಮಾಡ್ಬೇಕು. ಹಾಗಾಗಿ ಒಬ್ಬರನ್ನ ತುಳಿದು ( ಅದು ಜಾತಿ...ಪಕ್ಸ...ರಾಜಕಾರಣ ) ಮತ್ತೊಬ್ಬರನ್ನ ಉದ್ದಾರ ಮಾಡೋದು ಸರಿ ಅಲ್ಲ ಬಿಡಿ. ಹಸಿರುಶಾಲು ಹೊದ್ದು ಫೋಸ್ ಕೊಟ್ಟ ಡಾ. ಯಡಿಯೂರಪ್ಪ ಅಮಾಯಕರ ನೆರವಿಗೆ ಬರಬೇಕಿದೆ. ತಜ್ನರ ಅಭಿಪ್ರಾಯ ಪಡೆದು ಎಲ್ಲರಿಗೂ ನ್ಯಾಯ ಒದಗಿಸಬೇಕಿದೆ. ೧೭ ದಿನದಿಂದ ಉಪವಾಸ ಮಾಡ್ತಿರೋರ ಬಗ್ಗೆ ಕನಿಶ್ಟ ಕಾಳಜಿ ವಹಿಸಬೇಕಿದೆ...ಆ ಪ್ರಾಮಾಣಿಕತೆ ನಮ್ ಸಿಎಂಗೆ ಇದೆಯಾ? ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ...

No comments: