Friday, February 20, 2009
ಹೊಸ ಹುದ್ದೆ ಹೊಸ ಸವಾಲು
ಗೆಳೆಯರೇ..ನಿಮ್ಮೊಂದಿಗೆ ಒಂದಶ್ಟು ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಾನು ಪ್ರತಿನಿದಿಸುವ ಚಾನೆಲ್ ನಲ್ಲಿ ಈವರಗಿನ ಹುದ್ದೆಗಿಂತ ಇದು ಗುರುತರ ಅನ್ಕೊಂಡಿದೀನಿ. ಕುಲಗೆಡುತ್ತಿರುವ ರಾಜಕೀಯ ವ್ಯವಸ್ಟೆಯಲ್ಲಿ ಮಾದ್ಯಮದ ಸಿಬ್ಬಂದಿಯಾಗಿ ಈ ವಿಭಾಗದ ಮುಖ್ಯಸ್ತನೆಂಬ ಪಟ್ಟ ಖಂಡಿತ ಸುಲಭವಾಗಿ ನಿಬಾಯಿಸುವಂತದ್ದಲ್ಲ. ಸಂಸ್ತೆ ಹಾಗೂ ಹಿರಿಯ್ರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ದಕ್ಕೆ ಬರದ ಹಾಗೆ ಕೆಲಸ ಮಾಡ್ಬೇಕು ಅನ್ಕೊಂಡಿದೀನಿ. ನಮ್ಮ ಬ್ಯೂರೋದ ಎಲ್ಲಾ ಸಹಪಾಟಿಗಳ ಸಹಕಾರ ಇದಕ್ಕೆ ಅಗತ್ಯ ಇದು ಸಿಗುವ ಭರವಸೆ ನಂದು. ಯಾಕಂದ್ರೆ ಇದು ಟೀಂವರ್ಕ್...
Sunday, February 15, 2009
ಸರ್ಕಾರಕ್ಕೆ ಒಂದು ಎಚ್ಚರಿಕೆ...
ಪ್ರತಿ ವಾರಾಂತ್ಯದಲ್ಲಿ ಒಂದು ಸ್ಪೆಶಲ್ ರಿಪೋರ್ಟ ಕೊಡೋ ಹೊಣೆಗಾರಿಕೆ ನಂದು. ಪ್ರತಿ ವಾರ ಏನಾದ್ರು ಬೇಟೆ ಆಡ್ಲೇಬೇಕು. ಹಾಗಂದುಕೊಂಡೇ ಈ ವಾರ ನಾನು ಹೊರಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ..ಸರ್ಕಾರ ೫ ಸಾವಿರ ಕೋಟಿ ವೆಚ್ಚದಲ್ಲಿ ಭದ್ರಾ ನದಿ ನೀರನ್ನ ಪಕ್ಕದ ತುಮಕೂರು-ಚಿತ್ರದುರ್ಗ-ಕೋಲಾರ ಜಿಲ್ಲೆಗಳಿಗೆ ತರ್ತಿದೆ. ತರ್ಲಿ ಬಿಡಿ..ಆದ್ರೆ ಆ ಭಾಗದ ಜನರನ್ನ ಹಾಳುಮಾಡಿ ಮತ್ತೊಬ್ಬರ ಉದ್ದಾರಕ್ಕೆ ಮುಂದಾಗ್ತಿರೋದು ಯಾಕೆ ಅಂತಾ ಗೊತ್ತಾಗ್ತಿಲ್ಲ. ಈ ಭಾಗದಲ್ಲಿ ೬ ಕಿಮೀಯಶ್ಟು ಸುರಂಗ ತೋಡಿ ನೀರನ್ನ ತರ್ಲಾಗ್ತಿದೆ. ಈ ಸುರಂಗಕ್ಕೆ ನಾಗರಿಕರ ವಿರೋದ ಯಾಕಪ್ಪಾ ಅಂದ್ರೆ ಈಗಾಗ್ಲೆ ಹಾಸನದ ಬಾಗೂರು-ನವಿಲೆ ದುರಂತ ಯೋಜನೆ ಕಣ್ಮುಂದಿನ ನಿದರ್ಶನ. ಹೀಗಿದ್ದೂ ಸರ್ಕಾರ ಜರ್ಮನಿ ಟೆಕ್ನಾಲಜಿ ಮಾಡ್ತೀವಿ ಅಂತಿದೆ. ಅದೇನೇ ಮಾಡಿದ್ರು ಭೂಮಿ ಒಳಗೇ ಮಾಡ್ಬೇಕು. ಹಾಗಾಗಿ ಒಬ್ಬರನ್ನ ತುಳಿದು ( ಅದು ಜಾತಿ...ಪಕ್ಸ...ರಾಜಕಾರಣ ) ಮತ್ತೊಬ್ಬರನ್ನ ಉದ್ದಾರ ಮಾಡೋದು ಸರಿ ಅಲ್ಲ ಬಿಡಿ. ಹಸಿರುಶಾಲು ಹೊದ್ದು ಫೋಸ್ ಕೊಟ್ಟ ಡಾ. ಯಡಿಯೂರಪ್ಪ ಅಮಾಯಕರ ನೆರವಿಗೆ ಬರಬೇಕಿದೆ. ತಜ್ನರ ಅಭಿಪ್ರಾಯ ಪಡೆದು ಎಲ್ಲರಿಗೂ ನ್ಯಾಯ ಒದಗಿಸಬೇಕಿದೆ. ೧೭ ದಿನದಿಂದ ಉಪವಾಸ ಮಾಡ್ತಿರೋರ ಬಗ್ಗೆ ಕನಿಶ್ಟ ಕಾಳಜಿ ವಹಿಸಬೇಕಿದೆ...ಆ ಪ್ರಾಮಾಣಿಕತೆ ನಮ್ ಸಿಎಂಗೆ ಇದೆಯಾ? ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ...
Saturday, February 14, 2009
ಅಮರ ಪ್ರೇಮ ಚಿರಾಯುವಾಗಲಿ...
ಪ್ರೀತಿ..ಪ್ರೇಮ..ಸ್ನೇಹ..ತ್ಯಾಗ..ಇವೆಲ್ಲದ್ರ ನಡುವೆ ಇರೋ ಬಾಂದವ್ಯಾನೇ ಅಮರಪ್ರೇಮ. ಹಾಗಾಗಿನೇ ನಾನು ಅಮರಪ್ರೇಮವನ್ನ ಉಲ್ಲೇಖಿಸಿದ್ದೇನೆ.ಪ್ರೇಮಿಗಳಿಗೊಂದು ಪ್ರತ್ಯೇಕ ದಿನಾ ಬೇಕು ಅನ್ನೋದನ್ನೇ ನಾನು ಆಪೋಸ್ ಮಾಡ್ತೀನಿ. ಯಾಕಂದ್ರೆ ನಿತ್ಯ ಪ್ರೇಮವೇ ಜೀವಂತಿಕೆಯ ಸಂಕೇತ ಅಂತಾ ನಂಬೋನು ನಾನು. ಈ ದಿನಾನಾ ಮುಂದೆ ಇಟ್ಕೊಂಡು ಯಾರಾರು ಏನೇನೋ ಮಾಡ್ತಾರೆ. ಸಂಸ್ಕ್ರತಿ ಅಂತಾ ಬೊಬ್ಬೇ ಹೊಡಿತಾರೆ. ಆದ್ರೆ ನಿಜವಾದ ಪ್ರೀತಿ ಸಂಸ್ಕ್ರತಿಯನ್ನ ಮೀರಿದ್ದಾಗಿರ್ತದೆ. ಯಾರಿಗೆ ಯಾರೋ ಚೆಡ್ಡಿ ಕಳಸ್ತಾರೆ ಅಂದ್ರೆ ...ಅತವಾ ಅವ್ರಿಗೆ ಮತ್ಯಾರೋ ಖಾದಿ ಸೀರೆ ಕಳಿಸ್ತಾರೆ ಅಂದ್ರೆ ನನ್ನ ಮಟ್ಟಿಗೆ ಅದು ಸುದ್ದೀನೇ ಅಲ್ಲ. ಶುದ್ದ ಪ್ರೀತಿಗೆ ಯಾವತ್ತೂ ಸೋಲಿಲ್ಲ. ಅದಕ್ಕೆ ದ್ವೇಶಾನಾ ಗೆಲ್ಲೋ ಶಕ್ತಿ ಇರ್ತದೆ. ಹಾಗಾಗಿ ಎಲ್ಲಾ ಪ್ರೇಮಿಗಳ ಪ್ರೇಮ ಚಿರಾಯುವಾಗಲಿ ಅಂತಾ ಶುಭ ಕೋರೋಣ...
Tuesday, February 3, 2009
ಇವ್ರೆ ಕಚ್ಚಾಡಿದ್ರೆ ಹೆಂಗೆ...
ಕೇಂದ್ರ ಚುನಾವಣಾ ಆಯೋಗ ಅಂದ್ರೆ ಅದೊಂದು ಸ್ವಾಯತ್ತ ಸಂಸ್ತೆ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಚು.ಆಯೋಗಕ್ಕೆ ಗುರುತರ ಜವಾಬ್ದಾರಿ ಇದೆ. ರಾಜಕೀಯ ಪಾರ್ಟಿಗಳಿಗೆ ಲಗಾಮು ಹಾಕಬೇಕಾದ ಈ ಸಂಸ್ತೆಯೇ ರಾಜಕಾರಣ ಮಾಡಹೊರಟರೆ ಗತಿ ಏನು? ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರ ಬಗ್ಗೆ ಎಲ್ರಿಗೂ ಒಳ್ಳೆ ಅಭಿಪ್ರಾಯ ಇತ್ತು. ಯಾಕಂದ್ರೆ ಸಾಕಶ್ಟು ಹೊಸ ಪ್ರಯೋಗ ತಂದು ಯಶಸ್ಸು ಕಂಡೋರು. ಆದ್ರೆ ನವೀನ್ ಚಾವ್ಲಾ ಅವರೊಂದಿಗಿನ ಈ ಪತ್ರ ವಿವಾದ ಚರ್ಚೆಗೆ ಗ್ರಾಸವಾಗಿರೋ ಹಿನ್ನೆಲೆಯಲ್ಲಿ ಆಯೋಗದ ಕಾರ್ಯ ಚಟುವಟಿಕೆ ಬಗ್ಗೆಯೇ ಸಂಶಯ ಬರೋ ಹಾಗಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚುನಾವಣೆಗಳೇ ವ್ಯವಸ್ತೆಗೆ ನಿರ್ಣಾಯಕ. ಇಂತಹ ಸನ್ನಿವೇಶದಲ್ಲಿ ಆಯುಕ್ತರ ನಡುವಿನ ಕೆಸರೆರೆಚಾಟ ಸರಿಯಲ್ಲ. ಇರೋ ಮೂರು ಮಂದಿಯಲ್ಲಿ ಕಳ್ಳರು ಯಾರು ಅನ್ನೋ ಸಂಶಯ ಬರೋ ಹಾಗೆ ಆಗಬಾರದು. ಮುಂಬರುವ ಲೋಕಸಭಾ ಚುನಾವಣೆ ಘೋಶಣೆಗೆ ಮುನ್ನ ಮನಸ್ತಾಪ ಮರೆತು ವ್ಯವಸ್ತೆಯ ಉನ್ನತಿಗೆ ಶ್ರಮಿಸಲೆಂದು ಆಶಿಸೋಣ....
Monday, January 12, 2009
ಇದಾದರೂ ಸಾರ್ತಕವಾಗಲಿ....
ರಾಜದಾನಿ ಬೆಂಗಳೂರನ್ನು ಹೊರತು ಪಡಿಸಿ ಬೇರೆಡೆ ಅದಿವೇಶನ ನಡೆಸಿದ ಕೀರ್ತಿ ಮಾತ್ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಲ್ಲಬೇಕು. ಆದ್ರೆ ೨೦೦೭ ರಲ್ಲಿ ಬೆಳಗಾವಿಯಲ್ಲಿ ನಡೆದ ಜಂಟಿ ಅದಿವೇಶನ್ ಕೇವಲ ಅಬ್ಬರಕ್ಕಶ್ಟೇ ಸೀಮಿತವಾಗಿತ್ತು. ಈ ವರುಶವೂ ೧೦ ದಿನಗಳ ಕಾಲ ಅದಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವದು ಘೋಶಣೆಯಾಗಿಯೇ ಉಳಿದಿದೆ. ಗಡಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಹ್ಯೆದ್ರಾಬಾದ ಕರ್ನಾಟಕ ಪ್ರತ್ಯೇಕ ದ್ವಜಾರೋಹಣ ನಡೆದೇಯಿದೆ. ಈ ಜನವರಿ ೨೬ಕ್ಕೂ ಮತ್ತೆ ಹಾರುತ್ತೆ. ಒಂದೆಡೆ ಕಾಸರಗೋಡು ಮತ್ತೊಂದೆಡೆ ಬೆಳಗಾವಿ. ಇನ್ನೊಂದೆಡೆ ಹೊಗೇನಕಲ್ ...ಹೀಗೆ ಕಿತ್ತು ತಿನ್ನುವವರ ಸಂಖ್ಯೆಯೇ ದೊಡ್ಡದಿದೆ. ಪಕ್ಸದ ಪ್ರಣಾಳಿಕೆಯಲ್ಲಿ ಅಬ್ಬರಿಸಿದ್ದ ಬಿಜೆಪಿ ಆಡಳಿತದಲ್ಲಿ ಅದನ್ನ ಜಾರಿಗೊಳಿಸಿದಲ್ಲಿ ಬೆಳಗಾವಿಯಲ್ಲಿ ಅದಿವೇಶನ ನಡೆಸಿದ್ದಕ್ಕೂ ಒಂದು ಅರ್ತ ಬಂದೀತು..ಇತ್ತ ಡಾ. ಬಿ.ಎಸ್.ಯಡಿಯೂರಪ್ಪ ಚಿಂತಿಸಿದರೆ
ಅಲ್ಪವಾದರೂ ಅನುಕೂಲವಾದೀತು.
ಇದಕ್ಕೆ ಹೊರತಾಗಿ ಮತ್ತೊಂದು ಸಂಗತಿ ಪ್ರಸ್ತಾಪಿಸ್ತಿದೇನೆ. ನಾನು ಕಳೆದ ವಾರ ಎಂ.ಎಂ.ಹಿಲ್ಸ್ ನತ್ತ ಕಾರ್ಯನಿಮಿತ್ತ ಹೋಗಿದ್ದೆ. ಹಾಗೇ ನರಹಂತಕ ವೀರಪ್ಪನ್ ಹುಟ್ಟೂರು ಗೋಪಿನಾತಂಗೂ ವಿಸಿಟ್ ಕೊಟ್ಟಿದ್ದೆ. ಆತನ ತಲೆ ಉರುಳಿ ನಾಲ್ಕು ವರುಶ ಕಳೆದಿದ್ದರೂ ಅಲ್ಲಿನ ಜನರಲ್ಲಿ ಆತನ ನೆನಪು ಇನ್ನೂ ಮಾಸಿಲ್ಲ. ಅವರಿನ್ನೂ ಭೀತಿಯಿಂದ ಹೊರ ಬಂದಿಲ್ಲ. ಆತನ ಸಮಾದಿ ನೋಡೋ ಕುತೂಹಲದಿಂದ ನಾವು ಹೋಗಿದ್ದು ತಮಿಳುನಾಡಿನ ಮೂಲಕ್ಕಾಡಿಗೆ. ಸ್ಮಶಾನದ ಒಂದು ಮೂಲೆಯಲ್ಲಿ ಕಂಡ ಮಣ್ಣಿನ ರಾಶಿ ವೀರಪ್ಪನ್ ಸಮಾದಿ ಎಂದು ತಿಳಿದಾಗ ಅನಿಸಿದ್ದು ಅಂದ್ರೆ ಮಾನವ ಮೂಳೆ ಮಾಂಸದ ತಡಿಕೆ.... ಈ ವಾಸ್ತವ ತಿಳಿಯೋ ಹೊತ್ತಿಗೆ ಆತ ಬಹುದೂರ ಸಾಗಿರ್ತಾನೆ...ತಪ್ಪು..ಸರಿಗಳ...ಮಾರ್ಗ ಅರಿಯುವ ಮುನ್ನ ...ಬದುಕಿಗೆ ಅಂತ್ಯದ ಸಮಯ ಸಮೀಪಿಸಿರುತ್ತೆ....
ಅಲ್ಪವಾದರೂ ಅನುಕೂಲವಾದೀತು.
ಇದಕ್ಕೆ ಹೊರತಾಗಿ ಮತ್ತೊಂದು ಸಂಗತಿ ಪ್ರಸ್ತಾಪಿಸ್ತಿದೇನೆ. ನಾನು ಕಳೆದ ವಾರ ಎಂ.ಎಂ.ಹಿಲ್ಸ್ ನತ್ತ ಕಾರ್ಯನಿಮಿತ್ತ ಹೋಗಿದ್ದೆ. ಹಾಗೇ ನರಹಂತಕ ವೀರಪ್ಪನ್ ಹುಟ್ಟೂರು ಗೋಪಿನಾತಂಗೂ ವಿಸಿಟ್ ಕೊಟ್ಟಿದ್ದೆ. ಆತನ ತಲೆ ಉರುಳಿ ನಾಲ್ಕು ವರುಶ ಕಳೆದಿದ್ದರೂ ಅಲ್ಲಿನ ಜನರಲ್ಲಿ ಆತನ ನೆನಪು ಇನ್ನೂ ಮಾಸಿಲ್ಲ. ಅವರಿನ್ನೂ ಭೀತಿಯಿಂದ ಹೊರ ಬಂದಿಲ್ಲ. ಆತನ ಸಮಾದಿ ನೋಡೋ ಕುತೂಹಲದಿಂದ ನಾವು ಹೋಗಿದ್ದು ತಮಿಳುನಾಡಿನ ಮೂಲಕ್ಕಾಡಿಗೆ. ಸ್ಮಶಾನದ ಒಂದು ಮೂಲೆಯಲ್ಲಿ ಕಂಡ ಮಣ್ಣಿನ ರಾಶಿ ವೀರಪ್ಪನ್ ಸಮಾದಿ ಎಂದು ತಿಳಿದಾಗ ಅನಿಸಿದ್ದು ಅಂದ್ರೆ ಮಾನವ ಮೂಳೆ ಮಾಂಸದ ತಡಿಕೆ.... ಈ ವಾಸ್ತವ ತಿಳಿಯೋ ಹೊತ್ತಿಗೆ ಆತ ಬಹುದೂರ ಸಾಗಿರ್ತಾನೆ...ತಪ್ಪು..ಸರಿಗಳ...ಮಾರ್ಗ ಅರಿಯುವ ಮುನ್ನ ...ಬದುಕಿಗೆ ಅಂತ್ಯದ ಸಮಯ ಸಮೀಪಿಸಿರುತ್ತೆ....
Thursday, January 1, 2009
ಸಿದ್ದು ಅಪ್ರಬುದ್ದತೆಯೇ?
ಯಾವದೇ ರಾಜಕಾರಣಿ ತಾನು ಬೆಳೆಯಲೋ ಇಲ್ಲ ಅಸ್ತಿತ್ವ ಉಳಿಸಿಕೊಳ್ಳಲೋ ರಾಜಕೀಯ ಪಕ್ಸ ಆಶ್ರಯಿಸುವದು ಅನಿವಾರ್ಯ. ಈ ನಿಟ್ಟಿನಲ್ಲೇ ಹಲವು ರಾಜಕಾರಣಿಗಳು ವಿವಿದೆಡೆ ಆಶ್ರಯ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೇಕೋ ಎಲ್ಲೂ ಸೂಕ್ತ ಆಶ್ರಯ ಸಿಗುತ್ತಿಲ್ಲ. ಸ್ವತಂತ್ರರಾಗಿ ರಾಜಕೀಯಕ್ಕೆ ಬಂದ ಸಿದ್ದು ಜನತಾದಳದಲ್ಲಿ ನೆಲೆ ಕಂಡುಕೊಂಡವರು. ದಶಕಗಳ ಕಾಲ ಅಲ್ಲಿದ್ದ ಅವರು ಅದಿಕಾರವನ್ನೂ ಅನುಭವಿಸಿದ್ರು. ಬಳಿಕ ಅಲ್ಲಿನ ವಿಶಮ ಸ್ಟಿತಿ ದಳ ತೊರೆಯುವಂತೆ ಮಾಡಿತ್ತು. ನಂತರ ಆಶ್ರಯಿಸಿದ ಕಾಂಗ್ರೆಸ್ ಆರಂಭದಿಂದಲೂ ಸಿದ್ದು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೀಗ ಸಿದ್ದು ಅವರ ಆಲೋಚನೆ ಹೊಸ ರಾಜಕೀಯ ಪಕ್ಸ. ಸೀಮಿತ ಜಾತಿ ಚಿಂತನೆ ಬಿಟ್ಟು ಜನತಾ ಪರಿವಾರವನ್ನ ಒಗ್ಗೂಡಿಸುವತ್ತ ಸಿದ್ದು ಗಮನ ಹರಿಸಿದಲ್ಲಿ ಕರ್ನಾಟಕ ಉತ್ತಮ ಪ್ರಾದೇಶಿಕ ಪಕ್ಸವನ್ನು ಕಾಣಲು ಸಾದ್ಯವಾಬಹುದು. ಆದ್ರೆ ರಾಜ್ಯದಲ್ಲಿನ ರಾಜಕೀಯ ಇತಿಹಾಸ ಪೂರಕವಾಗಿಲ್ಲ ಅನ್ನುವದು ಸಿದ್ದು ರಾಜಕೀಯ ಭವಿಸ್ಯವನ್ನ ಮಸುಕಾಗಿಸಬಹುದು..
ಎನಿವೇ ಬೆಸ್ಟ್ ಆಫ್ ಲಕ್ ಸಿದ್ರಾಮಯ್ಯನವ್ರೇ...
ಎನಿವೇ ಬೆಸ್ಟ್ ಆಫ್ ಲಕ್ ಸಿದ್ರಾಮಯ್ಯನವ್ರೇ...
Tuesday, December 30, 2008
ಸ್ಟಿರತೆಯ ಸೂಚನೆಯೇ
ಸ್ನೇಹಿತರೇ.. ಉಪ ಚುನಾವಣೆಯ ಫಲಿತಾಂಶವನ್ನ ಭಿನ್ನ ರೀತಿಯಲ್ಲಿ ಬಣ್ಣಿಸಲಾಗ್ತಿದೆ. ಸ್ತಿರ ಸರ್ಕಾರಕ್ಕೆ ಜನತೆ ಕೊಟ್ಟ ತೀರ್ಪು ಅನ್ನೋದು ಮುಖ್ಯಮಂತ್ರಿಯ ನುಡಿ. ಅದೇನೇ ಇದ್ರು ಮತದಾರ ಮಾತ್ರ ಸರ್ಕಾರಕ್ಕೆ ಸ್ಪಶ್ಟ ಎಚ್ಚರಿಕೆ ಸಂದೇಶ ನೀಡಿದ್ದಾನೆ. ನೀವೇನು ಮಾದರಿ ಆಡಳಿತ ನಡೆಸ್ತಿದೀರೀ ಅನ್ನೋ ಸರ್ಟಿಫಿಕೇಟ್ ಅಂತೂ ಇದಲ್ಲ. ಹಾಗಾಗಿ ಬಿಜೆಪಿ ಫಲಿತಾಂಶದಿಂದ ಉಬ್ಬುಬೇಕಿಲ್ಲ.ಬದಲಾಗಿ ವಸೂಲಿ ರಾಜಕಾರಣಕ್ಕೆ ತಿಲಾಂಜಲಿ ಇಟ್ಟೂ ಮುಂದುವರಿಯುವದು ಒಳಿತು.
ಜೊತೆಗೆ ಈವತ್ತಿನ ಫಲಿತಾಂಶದಿಂದ ಕಾಂಗ್ರೆಸ್ ದೊಡ್ಡ ಪಾಟ ಕಲೀಬೇಕಿದೆ. ಜನ ಮಣ್ಣಿನ ಮಕ್ಕಳನ್ನ ಮರೆತಿಲ್ಲ ಅನ್ನೋದನ್ನೂ ತೋರ್ಸಿದಾರೆ. ಹಾಗಾಗಿ
ರಾಜ್ಯದ ಅಭಿವ್ರದ್ದಿ ಮಂತ್ರ ಪ್ರಮುಖವಾಗಲಿ. ಪಕ್ಸಾತೀತವಾಗಿ ಜನಪರ ಚಿಂತನೆಗಳು ನಡೆಯಲಿ.
ಜೊತೆಗೆ ಈವತ್ತಿನ ಫಲಿತಾಂಶದಿಂದ ಕಾಂಗ್ರೆಸ್ ದೊಡ್ಡ ಪಾಟ ಕಲೀಬೇಕಿದೆ. ಜನ ಮಣ್ಣಿನ ಮಕ್ಕಳನ್ನ ಮರೆತಿಲ್ಲ ಅನ್ನೋದನ್ನೂ ತೋರ್ಸಿದಾರೆ. ಹಾಗಾಗಿ
ರಾಜ್ಯದ ಅಭಿವ್ರದ್ದಿ ಮಂತ್ರ ಪ್ರಮುಖವಾಗಲಿ. ಪಕ್ಸಾತೀತವಾಗಿ ಜನಪರ ಚಿಂತನೆಗಳು ನಡೆಯಲಿ.
Subscribe to:
Posts (Atom)