Wednesday, May 26, 2010
ಯಾವುದು ಕೋಮು bhavane
ದೇಶವೇ ಬೆಚ್ಚಿ ಬಿದ್ದ ಮಂಗಳೂರು ವಿಮಾನ ದುರಂತ ಎಲ್ಲರಿಗೂ ತಿಳಿದಿದೆ. ಜೀವ ಕಳೆದುಕೊಂಡ ಅದೆಸ್ತು ಮಂದಿ ಯಾವ ರೀತಿಯಲ್ಲಿ ನೋವು ಉಂಡಿದ್ದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ನಾನು ಹೇಳಹೊರತಿರುವದು ಅಲ್ಲಿನ ಸ್ಥಳೀಯರ ಜತ್ಯ್ಹತೀಥ ಸ್ಪಂದನೆಯ ಬಗ್ಗೆ..ಶವ ಹುಡುಕುವಾಗ ಯಾರಿಗೂ ಯಾವ್ಬ ಜಾತಿಯ ಶವ ಎಂಬ ಅರಿವೇ ಯಿರಲಿಲ್ಲ..ಮಂಗಳೂರು ಎಂದರೆ ಕೋಮು ದಳ್ಳುರಿ ಕೇಂದ್ರ ಅನ್ನೋರಿಗೆ ಈ ಘಟನೆ ಪಟ ಕಲಿಸಿದೆ. ಲೋಪ ಯಾರದೇ ಆಗಿರಲಿ ಜೀವೆ ತೆಗೆಯುವ ಯಿಂಥಹ ಪ್ರಕರಣಗಳು ಮರುಕಳಿಸದಿರಲಿ ಅಂತ ಬಗವನ್ಥನಲ್ಲಿ ಬೇಡೋಣ...
Monday, October 12, 2009
ಮಿಡಿದ manasu
ನಮ್ಮನಾಡು ಹಿಂದೆಂದು ಕಂಡರಿಯದ ಪ್ರಮಾಣದಲ್ಲಿ ಅತ್ಹೀವ್ರುಸ್ತಿಗೆ ತುಥಗಿದೆ. ಸಂಸ್ತ್ರಸ್ತರ ನೆರವಿಗೆ ಕನ್ನಡಿಗರು ತೋರಿದ ಮಾನವೀಯ ಮುಖ ಮಾತ್ರ ಎಲ್ಲರ ಕಣ್ಣು ತುಂಬಿಸಿದೆ. ರಾಜ್ಯದ ಮುಖ್ಯಮಂತ್ರಿಯೇ ಸ್ವತಃ ರೂದಿಗೆಯಿಲಿಧು ನೆರವು ಕೋರಿದ್ದು ಮಾತ್ರ ಮೆಚುವೆಂಥದ್ದು. ನಾಡಿನ ಜನರು ಹೊಥಿನ ಕೂಳಿಗೆ ತೊಂದರೆ ಯಿದ್ದರು ಕಸ್ತದಲ್ಲಿರುವವರ ನೆರವಿಗೆ ಬಂದಿದ್ದು ಖುಷಿ ಕೊಟ್ಟಿದೆ. ನೆಮ್ಮದಿ ಕಳೆದುಕೊಂಡಿರುವ ಜನರ ಹೆಸರಿನಲ್ಲಿ ಸಂಗ್ರಹವಾಗಿರುವ ನೆರವು ಮಾತ್ರ ದುರುಪಯೋಗ ಆಗಬಾರದು.ಮಾಡಿಕೊಳ್ಳುವವರಿಗೂ ಒಳ್ಳೆದಗೋಲ್ಲ. ನಾಡಿನ ಜನರ ಪ್ರೀತಿ ಹಾಗು ಮಿಡಿದಮನಗಳು ಅಭಿನಂದನೀಯ.
Friday, October 2, 2009
ಮನುಷ್ಯನಿಗೆ ಯಾಕೆ ಒಮ್ಮೊಮ್ಮೆ ಕೆಟ್ಟ ಚಿಂತನೆಗಳು ಬರುಥವೋ ಗೊತ್ತಿಲ್ಲ .ನನ್ನ ಬದುಕಿನಲ್ಲೂ ಯಿಂಥಹ ಸಂದರ್ಭ ಬಂದಿದೆ. ನಾನು ಮಾಡದ ತಪ್ಪಿಗೆ ವ್ಯವಸ್ತ್ರ್ಹೆಯಡಿ ನಾನು ಬಲಿಪಶು ಆಗಿದ್ದೇನೆ. ಹಾಗಂತ ನಾನೇನು ಕೈಕಟ್ಟಿ ಕುಳಿತಿಲ್ಲ ಆದರು ಯಿಂಥಹ ಸನ್ನಿವೇಶಗಳು ಮನಸ್ಸನ್ನು ಘಸಿಗೊಲಿಸುತ್ಹವೇ. ನಾನು ಕೇಳಿಕೊಳ್ಳೋದು ಯಿಸ್ತೇನೆ ಅಪ್ಪ ದೇವ್ರೇ ಯಿವ್ರಿಗೆ ಓಲೆ ಬುದ್ದು ಕೊಡಪ್ಪ ಅಂಥ. ಜೊತೆಗೆ ಮುಂದೆಯಾದ್ರೂ ಯಿಂಥವ್ರು ಪಟ ಕಲೀಲಿ.
Friday, February 20, 2009
ಹೊಸ ಹುದ್ದೆ ಹೊಸ ಸವಾಲು
ಗೆಳೆಯರೇ..ನಿಮ್ಮೊಂದಿಗೆ ಒಂದಶ್ಟು ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಾನು ಪ್ರತಿನಿದಿಸುವ ಚಾನೆಲ್ ನಲ್ಲಿ ಈವರಗಿನ ಹುದ್ದೆಗಿಂತ ಇದು ಗುರುತರ ಅನ್ಕೊಂಡಿದೀನಿ. ಕುಲಗೆಡುತ್ತಿರುವ ರಾಜಕೀಯ ವ್ಯವಸ್ಟೆಯಲ್ಲಿ ಮಾದ್ಯಮದ ಸಿಬ್ಬಂದಿಯಾಗಿ ಈ ವಿಭಾಗದ ಮುಖ್ಯಸ್ತನೆಂಬ ಪಟ್ಟ ಖಂಡಿತ ಸುಲಭವಾಗಿ ನಿಬಾಯಿಸುವಂತದ್ದಲ್ಲ. ಸಂಸ್ತೆ ಹಾಗೂ ಹಿರಿಯ್ರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ದಕ್ಕೆ ಬರದ ಹಾಗೆ ಕೆಲಸ ಮಾಡ್ಬೇಕು ಅನ್ಕೊಂಡಿದೀನಿ. ನಮ್ಮ ಬ್ಯೂರೋದ ಎಲ್ಲಾ ಸಹಪಾಟಿಗಳ ಸಹಕಾರ ಇದಕ್ಕೆ ಅಗತ್ಯ ಇದು ಸಿಗುವ ಭರವಸೆ ನಂದು. ಯಾಕಂದ್ರೆ ಇದು ಟೀಂವರ್ಕ್...
Sunday, February 15, 2009
ಸರ್ಕಾರಕ್ಕೆ ಒಂದು ಎಚ್ಚರಿಕೆ...
ಪ್ರತಿ ವಾರಾಂತ್ಯದಲ್ಲಿ ಒಂದು ಸ್ಪೆಶಲ್ ರಿಪೋರ್ಟ ಕೊಡೋ ಹೊಣೆಗಾರಿಕೆ ನಂದು. ಪ್ರತಿ ವಾರ ಏನಾದ್ರು ಬೇಟೆ ಆಡ್ಲೇಬೇಕು. ಹಾಗಂದುಕೊಂಡೇ ಈ ವಾರ ನಾನು ಹೊರಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಗೆ..ಸರ್ಕಾರ ೫ ಸಾವಿರ ಕೋಟಿ ವೆಚ್ಚದಲ್ಲಿ ಭದ್ರಾ ನದಿ ನೀರನ್ನ ಪಕ್ಕದ ತುಮಕೂರು-ಚಿತ್ರದುರ್ಗ-ಕೋಲಾರ ಜಿಲ್ಲೆಗಳಿಗೆ ತರ್ತಿದೆ. ತರ್ಲಿ ಬಿಡಿ..ಆದ್ರೆ ಆ ಭಾಗದ ಜನರನ್ನ ಹಾಳುಮಾಡಿ ಮತ್ತೊಬ್ಬರ ಉದ್ದಾರಕ್ಕೆ ಮುಂದಾಗ್ತಿರೋದು ಯಾಕೆ ಅಂತಾ ಗೊತ್ತಾಗ್ತಿಲ್ಲ. ಈ ಭಾಗದಲ್ಲಿ ೬ ಕಿಮೀಯಶ್ಟು ಸುರಂಗ ತೋಡಿ ನೀರನ್ನ ತರ್ಲಾಗ್ತಿದೆ. ಈ ಸುರಂಗಕ್ಕೆ ನಾಗರಿಕರ ವಿರೋದ ಯಾಕಪ್ಪಾ ಅಂದ್ರೆ ಈಗಾಗ್ಲೆ ಹಾಸನದ ಬಾಗೂರು-ನವಿಲೆ ದುರಂತ ಯೋಜನೆ ಕಣ್ಮುಂದಿನ ನಿದರ್ಶನ. ಹೀಗಿದ್ದೂ ಸರ್ಕಾರ ಜರ್ಮನಿ ಟೆಕ್ನಾಲಜಿ ಮಾಡ್ತೀವಿ ಅಂತಿದೆ. ಅದೇನೇ ಮಾಡಿದ್ರು ಭೂಮಿ ಒಳಗೇ ಮಾಡ್ಬೇಕು. ಹಾಗಾಗಿ ಒಬ್ಬರನ್ನ ತುಳಿದು ( ಅದು ಜಾತಿ...ಪಕ್ಸ...ರಾಜಕಾರಣ ) ಮತ್ತೊಬ್ಬರನ್ನ ಉದ್ದಾರ ಮಾಡೋದು ಸರಿ ಅಲ್ಲ ಬಿಡಿ. ಹಸಿರುಶಾಲು ಹೊದ್ದು ಫೋಸ್ ಕೊಟ್ಟ ಡಾ. ಯಡಿಯೂರಪ್ಪ ಅಮಾಯಕರ ನೆರವಿಗೆ ಬರಬೇಕಿದೆ. ತಜ್ನರ ಅಭಿಪ್ರಾಯ ಪಡೆದು ಎಲ್ಲರಿಗೂ ನ್ಯಾಯ ಒದಗಿಸಬೇಕಿದೆ. ೧೭ ದಿನದಿಂದ ಉಪವಾಸ ಮಾಡ್ತಿರೋರ ಬಗ್ಗೆ ಕನಿಶ್ಟ ಕಾಳಜಿ ವಹಿಸಬೇಕಿದೆ...ಆ ಪ್ರಾಮಾಣಿಕತೆ ನಮ್ ಸಿಎಂಗೆ ಇದೆಯಾ? ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ...
Saturday, February 14, 2009
ಅಮರ ಪ್ರೇಮ ಚಿರಾಯುವಾಗಲಿ...
ಪ್ರೀತಿ..ಪ್ರೇಮ..ಸ್ನೇಹ..ತ್ಯಾಗ..ಇವೆಲ್ಲದ್ರ ನಡುವೆ ಇರೋ ಬಾಂದವ್ಯಾನೇ ಅಮರಪ್ರೇಮ. ಹಾಗಾಗಿನೇ ನಾನು ಅಮರಪ್ರೇಮವನ್ನ ಉಲ್ಲೇಖಿಸಿದ್ದೇನೆ.ಪ್ರೇಮಿಗಳಿಗೊಂದು ಪ್ರತ್ಯೇಕ ದಿನಾ ಬೇಕು ಅನ್ನೋದನ್ನೇ ನಾನು ಆಪೋಸ್ ಮಾಡ್ತೀನಿ. ಯಾಕಂದ್ರೆ ನಿತ್ಯ ಪ್ರೇಮವೇ ಜೀವಂತಿಕೆಯ ಸಂಕೇತ ಅಂತಾ ನಂಬೋನು ನಾನು. ಈ ದಿನಾನಾ ಮುಂದೆ ಇಟ್ಕೊಂಡು ಯಾರಾರು ಏನೇನೋ ಮಾಡ್ತಾರೆ. ಸಂಸ್ಕ್ರತಿ ಅಂತಾ ಬೊಬ್ಬೇ ಹೊಡಿತಾರೆ. ಆದ್ರೆ ನಿಜವಾದ ಪ್ರೀತಿ ಸಂಸ್ಕ್ರತಿಯನ್ನ ಮೀರಿದ್ದಾಗಿರ್ತದೆ. ಯಾರಿಗೆ ಯಾರೋ ಚೆಡ್ಡಿ ಕಳಸ್ತಾರೆ ಅಂದ್ರೆ ...ಅತವಾ ಅವ್ರಿಗೆ ಮತ್ಯಾರೋ ಖಾದಿ ಸೀರೆ ಕಳಿಸ್ತಾರೆ ಅಂದ್ರೆ ನನ್ನ ಮಟ್ಟಿಗೆ ಅದು ಸುದ್ದೀನೇ ಅಲ್ಲ. ಶುದ್ದ ಪ್ರೀತಿಗೆ ಯಾವತ್ತೂ ಸೋಲಿಲ್ಲ. ಅದಕ್ಕೆ ದ್ವೇಶಾನಾ ಗೆಲ್ಲೋ ಶಕ್ತಿ ಇರ್ತದೆ. ಹಾಗಾಗಿ ಎಲ್ಲಾ ಪ್ರೇಮಿಗಳ ಪ್ರೇಮ ಚಿರಾಯುವಾಗಲಿ ಅಂತಾ ಶುಭ ಕೋರೋಣ...
Tuesday, February 3, 2009
ಇವ್ರೆ ಕಚ್ಚಾಡಿದ್ರೆ ಹೆಂಗೆ...
ಕೇಂದ್ರ ಚುನಾವಣಾ ಆಯೋಗ ಅಂದ್ರೆ ಅದೊಂದು ಸ್ವಾಯತ್ತ ಸಂಸ್ತೆ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಚು.ಆಯೋಗಕ್ಕೆ ಗುರುತರ ಜವಾಬ್ದಾರಿ ಇದೆ. ರಾಜಕೀಯ ಪಾರ್ಟಿಗಳಿಗೆ ಲಗಾಮು ಹಾಕಬೇಕಾದ ಈ ಸಂಸ್ತೆಯೇ ರಾಜಕಾರಣ ಮಾಡಹೊರಟರೆ ಗತಿ ಏನು? ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರ ಬಗ್ಗೆ ಎಲ್ರಿಗೂ ಒಳ್ಳೆ ಅಭಿಪ್ರಾಯ ಇತ್ತು. ಯಾಕಂದ್ರೆ ಸಾಕಶ್ಟು ಹೊಸ ಪ್ರಯೋಗ ತಂದು ಯಶಸ್ಸು ಕಂಡೋರು. ಆದ್ರೆ ನವೀನ್ ಚಾವ್ಲಾ ಅವರೊಂದಿಗಿನ ಈ ಪತ್ರ ವಿವಾದ ಚರ್ಚೆಗೆ ಗ್ರಾಸವಾಗಿರೋ ಹಿನ್ನೆಲೆಯಲ್ಲಿ ಆಯೋಗದ ಕಾರ್ಯ ಚಟುವಟಿಕೆ ಬಗ್ಗೆಯೇ ಸಂಶಯ ಬರೋ ಹಾಗಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚುನಾವಣೆಗಳೇ ವ್ಯವಸ್ತೆಗೆ ನಿರ್ಣಾಯಕ. ಇಂತಹ ಸನ್ನಿವೇಶದಲ್ಲಿ ಆಯುಕ್ತರ ನಡುವಿನ ಕೆಸರೆರೆಚಾಟ ಸರಿಯಲ್ಲ. ಇರೋ ಮೂರು ಮಂದಿಯಲ್ಲಿ ಕಳ್ಳರು ಯಾರು ಅನ್ನೋ ಸಂಶಯ ಬರೋ ಹಾಗೆ ಆಗಬಾರದು. ಮುಂಬರುವ ಲೋಕಸಭಾ ಚುನಾವಣೆ ಘೋಶಣೆಗೆ ಮುನ್ನ ಮನಸ್ತಾಪ ಮರೆತು ವ್ಯವಸ್ತೆಯ ಉನ್ನತಿಗೆ ಶ್ರಮಿಸಲೆಂದು ಆಶಿಸೋಣ....
Subscribe to:
Posts (Atom)